ಕಾಲೇಜಿನ ಬಗ್ಗೆ


ಕಾಲೇಜಿನ ಬಗ್ಗೆ:

ಶ್ರೀನಿವಾಸ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವು ೨೦೧೩ ರಲ್ಲಿ ಮಾನ್ಯತೆ ಪಡೆದಿದ್ದು ಸುಮಾರು ೧೮ ವಿವಿಧ ಕೋರ್ಸುಗಳನ್ನು ಪ್ರಾರಂಭಿಸಿದೆ. ಈ ಮೊದಲು ಎ. ಶಾಮ ರಾವ್ ಪ್ರತಿಷ್ಟಾನದ ಅಡಿಯಲ್ಲಿ ನಡೆಸಲ್ಪಡುತ್ತಿರುವ ಕೆಲವು ಕಾಲೇಜುಗಳನ್ನು ೨೦೧೭ ರ ನಂತರ ಶ್ರೀನಿವಾಸ ವಿಶ್ವವಿದ್ಯಾಲಯದ ಆಳ್ವಿಕೆಗೆ ಒಳಪಡಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ.
College of Computer Science and Information Science ಕೂಡಾ ಶ್ರೀನಿವಾಸ ವಿಶ್ವವಿದ್ಯಾಲಯದ ಆಳ್ವಿಕೆಗೆ ಒಳಪಟ್ಟ ಒಂದು ಕಾಲೇಜು ಆಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. 
ಈ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಝಾನದ ಬಗೆಗಿನ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಶಿಕ್ಷಣವನ್ನು ನೀಡುತ್ತಿದೆ.  ಈ ಕಾಲೇಜು ಮಂಗಳೂರಿನ ಹ್ರದಯ ಭಾಗದಲ್ಲಿದ್ದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಪಠ್ಯಕ್ರಮಗಳು, ಬೋಧನಾ ವಿಧಾನಗಳು ಹಾಗೂ ಸವಲತ್ತುಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಕಾಲೇಜಿನ ಸಮಯವು ಬೆಳಗ್ಗೆ ೯.೦೦ ಗಂಟೆಯಿಂದ ಮಧ್ಯಾಹ್ನ ೨.೦೦ ಗಂಟೆಯವರೆಗೆ ಮಾತ್ರ.  ಅತ್ಯುತ್ತಮ ಪ್ರಯೋಗ ಶಾಲೆಗಳಿದ್ದು ವಿದ್ಯಾರ್ಥಿಗಳು ಇದರ ಸಂಪೂರ್ಣ ಉಪಯೋಗ ಪಡೆಯಬಹುದು. ವಿದ್ಯಾರ್ಥಿಗಳಿಗೆ ಉಚಿತ ಅಂತರ್ಜಾಲದ ಸೇವೆಯೂ ಲಭ್ಯವಿದೆ.
ಕಾಲೇಜು ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಪ್ರೋತ್ಸಾಸ ನೀಡುತ್ತಿದೆ.

ಕಾಲೇಜು ವೃತ್ತಿಪರ ಶಿಕ್ಷಣವನ್ನು ನೀಡುತ್ತಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲರೂ ಮಾಹಿತಿ ತಂತ್ರಜ್ಝಾನದ ಹಲವು ಮಜಲುಗಳಲ್ಲಿ ಉತ್ತಮ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.



Post a Comment

0 Comments